ಮುಖಪುಟ :: ರಸ್ತೆ ಕಾಮಗಾರಿ: ವಾಹನ ಸಂಚಾರ ನಿಷೇಧ

ರಸ್ತೆ ಕಾಮಗಾರಿ: ವಾಹನ ಸಂಚಾರ ನಿಷೇಧ


07 September 2008

ಮಂಗಳೂರು, ಸೆ. ೬: ನಗರದ ಮಂಗಳೂರು ನರ್ಸಿಂಗ್ ಹೋಮ್‌ನಿಂದ ಬೆಂದೂರು ವೃತ್ತದವರೆಗೆ ಚತುಷ್ಪಥ ಕಾಂಕ್ರಿಟ್ ರಸ್ತೆಯ ಕಾಮಗಾರಿಯನ್ನು ಎಡಿಬಿ ಧನ ಸಹಾಯದಿಂದ ಕುಡ್ಸೆಂಪ್ ಯೋಜನೆಯಡಿ ಪ್ರಾರಂಭಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಈ ಸಂದರ್ಭ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ಪುತ್ತೂರು, ಬಿ.ಸಿ.ರೋಡ್, ಕಾಸರಗೋಡು ಕಡೆಯಿಂದ ಬಲ್ಮಠ ವೃತ್ತದ ಮೂಲಕ ಅಂಬೆಡ್ಕರ್ ವೃತ್ತಕ್ಕೆ ಬಂದು ಸ್ಟೇಟ್ ಬ್ಯಾಂಕ್ ಕಡೆಗೆ ಮುಂದುವರಿಯುವ ಎಲ್ಲ ಸಿಟಿ ಸರ್ವಿಸ್, ಕೆಎಸ್ಸಾರ್ಟಿಸಿ ಬಸ್‌ಗಳು ಪಂಪ್‌ವೆಲ್‌ನಿಂದ ಹಳೆ ಕಂಕನಾಡಿ ರಸ್ತೆ ಮೂಲಕ ಕಂಕನಾಡಿ ವೃತ್ತಕ್ಕೆ ಬಂದು ಫಳ್ನೀರ್ ರಸ್ತೆಯಲ್ಲಿ ಮುಂದುವರಿಯುವುದು. ರೂ.ನಂ. ೫ರ ಬಸ್‌ಗಳು ಮೋರ್ಗನ್ಸ್‌ಗೇಟ್ ಕಡೆಯಿಂದ ಕಂಕನಾಡಿ ವೃತ್ತಕ್ಕೆ ಬಂದು ಫಳ್ನೀರ್ ರಸ್ತೆಯಲ್ಲಿ ಮುಂದುವರಿಯುವುದು.

ಸ್ಟೇಟ್ ಬ್ಯಾಂಕ್‌ನಿಂದ ಅಂಬೇಡ್ಕರ್ ವೃತ್ತ, ಬಲ್ಮಠ ವೃತ್ತದ ಮೂಲಕ ಕರಾವಳಿ ವೃತ್ತಕ್ಕೆ ಹೋಗುವ ಎಲ್ಲ ಸಿಟಿ ಸರ್ವಿಸ್, ಕೆಎಸ್ಸಾರ್ಟಿಸಿ ಬಸ್‌ಗಳು ತೋಟಗಾರಿಕೆ ಜಂಕ್ಷನ್‌ಗೆ ಬಂದು ಬಲಕ್ಕೆ ತಿರುಗಿ ಕರಾವಳಿ ವೃತ್ತದ ಮೂಲಕ ಮುಂದುವರಿಯುವುದು.

ಉಡುಪಿ, ಕಾರ್ಕಳ ಕಡೆಯಿಂದ ಬರುವ ಎಲ್ಲ ಎಕ್ಸ್‌ಪ್ರೆಸ್ ಬಸ್‌ಗಳು ನಂತೂರು-ಮಲ್ಲಿಕಟ್ಟೆ ಬಂಟ್ಸ್ ಹಾಸ್ಟೆಲ್ ಮೂಲಕ ಸ್ಟೇಟ್ ಬ್ಯಾಂಕ್‌ಗೆ ಬರುವುದು. ಪಂಪ್‌ವೆಲ್ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್‌ಸ್ಟಾಂಡ್‌ಗೆ ಬರುವ ಬಸ್‌ಗಳು ಬೆಂದೂರ್‌ವೆಲ್-ಮಲ್ಲಿಕಟ್ಟೆ-ಬಂಟ್ಸ್ ಹಾಸ್ಟೆಲ್ ಮೂಲಕ ಮುಂದುವರಿಯುವುದು. ಉಳಿದಂತೆ ಎಲ್ಲ ವಾಹನಗಳು ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು.

ಮೇಲಿನ ನಿಷೇತ ಅವಯಲ್ಲಿ ಈ ಕೆಳಗಿನ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು (ಬಸ್ ಹೊರತುಪಡಿಸಿ) ನಿಷೇಸಲಾಗಿದೆ.

*ತೋಟಗಾರಿಕೆ ವೃತ್ತದಿಂದ ಬಲ್ಮಠ ವೃತ್ತದವರೆಗೆ ಎರಡೂ ಕಡೆಯಿಂದ.

*ಕಂಕನಾಡಿ ಕಡೆಯಿಂದ ಪಂಪ್‌ವೆಲ್ ವೃತ್ತದ ತನಕ ಹಳೆ ಕಂಕನಾಡಿ ರಸ್ತೆಯಲ್ಲಿ

ತೋಟಗಾರಿಕೆ ವೃತ್ತದಿಂದ ಬಲ್ಮಠ ವೃತ್ತದವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ಇರುವುದಿಲ್ಲ. ಕಂಕನಾಡಿ ವೃತ್ತದಿಂದ ಕಂಕನಾಡಿ ಹಳೆ ರಸ್ತೆಯಲ್ಲಿ ಪಂಪ್‌ವೆಲ್ ವೃತ್ತದವರೆಗೆ, ರಸ್ತೆಯ ಎರಡೂ ಕಡೆ ಹಾಗೂ ತೋಟಗಾರಿಕೆ ವೃತ್ತದಿಂದ ಆಗ್ನೆಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಯನ್ನು ನಿಷೇಸಲಾಗಿದೆ. ಈ ಅಸೂಚನೆಯು ಸೆ. ೮ರಿಂದ ಕಾಂಕ್ರಿಟ್ ಕಾಮಗಾರಿ ಮುಗಿಯುವವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಕಾರಿ ಎಂ.ಮಹೇಶ್ವರ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.