ಮುಖಪುಟ :: ಮನಪಾ ಸಭೆ: ಗದ್ದಲಕ್ಕೆ ಕಾರಣವಾದ ‘ಮನಪಾದ ಅಭಿವೃದ್ಧಿ'

ಮನಪಾ ಸಭೆ: ಗದ್ದಲಕ್ಕೆ ಕಾರಣವಾದ ‘ಮನಪಾದ ಅಭಿವೃದ್ಧಿ'


01 November 2008

mcc1.jpg

ಮಂಗಳೂರು, ಅ.೩೧: ಮನಪಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಷಯಗಳಿಗೆ ಸಂಬಂಸಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಆರೋಪ ಪ್ರತ್ಯಾರೋಪಗಳಲ್ಲೇ ನಿರತವಾಗಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಅವಕಾಶ ದೊರೆಯದ ಮನಪಾದ ಅಭಿವೃದ್ಧಿ ಚರ್ಚೆ ಗದ್ದಲಕ್ಕೆ ಕಾರಣವಾದ ಘಟನೆ ಶುಕ್ರವಾರ ಮನಪಾ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮನಪಾ ವ್ಯಾಪ್ತಿಯಲ್ಲಿ ಕಸದ ವಿಲೇವಾರಿ ಆಗುತ್ತಿಲ್ಲ, ಚರಂಡಿ ವ್ಯವಸ್ಥೆ ಸುಸ್ಥಿತಿಯಲಿಲ್ಲ, ನೀರಿನ ಪೂರೈಕೆ ಸಮರ್ಪಕವಾಗಿಲ್ಲ, ಮನಪಾದಲ್ಲಿ ಅಪರಾಹ್ಣ ೩ ಗಂಟೆಯ ಬಳಿಕ ಕಿರಿಯ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸಿಗುತ್ತಿಲ್ಲ. ಮನಪಾದ ಆರೋಗ್ಯ ಇಲಾಖೆ ಸಂಪೂರ್ಣ ನಿಷ್ಕಿಯವಾಗಿದೆ. ಎಂದು ವಿಪಕ್ಷ ನಾಯಕ ಹರಿನಾಥ್ ಸೇರಿದಂತೆ ಇತರ ಸದಸ್ಯರು ಆರೋಪಿಸಿದಾಗ, ತ್ಯಾಜ್ಯಗಳ ವಿಲೇವಾರಿಯಲ್ಲಿನ ಅವ್ಯವಸ್ಥೆಗೆ ಸಂಬಂಸಿ ಮನಪಾದ ಸಹಾಯಕ ಆರೋಗ್ಯಾಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಮೇಯರ್ ಗಣೇಶ್ ಹೊಸಬೆಟ್ಟು ತಿಳಿಸಿದರು.

ಆದರೆ ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ವಿಪಕ್ಷದ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ವಿಪಕ್ಷ ಸದಸ್ಯರು ಚಹಾ ವಿರಾಮದ ಬಳಿಕ ಸಭೆ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಕ್ಕಾರ ಕೂಗುತ್ತಾ ಸಭಾತ್ಯಾಗ ನಡೆಸಿದರು.

ವಿಪಕ್ಷದ ಸಭಾತ್ಯಾಗವನ್ನು ಮೇಯರ್ ಪಲಾಯನವಾದ ಎಂದು ವ್ಯಂಗ್ಯ ಮಾಡಿದರೆ, ನಮ್ಮ ಅವಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸವನ್ನು ನೋಡಿ ಸಹಿಸಲಾಗದೆ ಪಲಾಯನಗೈಯುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಟೀಕಿಸಿದರು.