ಮುಖಪುಟ :: ಬೈಕ್ ಢಿಕ್ಕಿ: ವಿದ್ಯಾರ್ಥಿ ಬಲಿ

ಬೈಕ್ ಢಿಕ್ಕಿ: ವಿದ್ಯಾರ್ಥಿ ಬಲಿ


01 November 2008

ಇನ್ನೋರ್ವನಿಗೆ ಗಂಭೀರ ಗಾಯ

ಕಾಸರಗೋಡು, ಅ.೩೧: ರಾಷ್ಟ್ರೀಯ ಹೆದ್ದಾರಿ ಸಮೀಪದ ಚೆಂಗಳ ಸಂತೋಷ್ ನಗರದಲ್ಲಿ ಬೈಕ್ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಚೆಂಗಳ ಟಿಪ್ಪು ನಗರದ ಬೇವಿಂಜೆ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಎಂ.ಎಂ.ಮುಹಮ್ಮದ ರಫೀಕ್ (೧೮) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಅಬೂ ತ್ವಾಹಿರ್ (೧೮) ಎಂದು ಗುರುತಿಸಲಾಗಿದ್ದು, ಮಂಗಳೂರಿನ ಖಾಸUಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ರಫೀಕ್ ಚಟ್ಟಂಚಾಲ್ ಹೆಯರ್ ಸೆಕಂಡರಿ ಶಾಲೆಯ ಪ್ಲಸ್ ೧ ವಿದ್ಯಾರ್ಥಿಯಾಗಿದ್ದು, ಅಬೂ ತ್ವಾಹಿರ್ ಬೋವಿಕಾನ ಹಯರ್ ಸೆಕಂಡರಿ ಶಾಲೆಯ ಪ್ಲಸ್ ೧ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಈ ಇಬ್ಬರು ವಿದ್ಯಾರ್ಥಿಗಳು ಬೈಕ್‌ನಲ್ಲಿ ಚೆರ್ಕಳದಿಂದ ಮನೆಯ ಕಡೆಗೆ ತೆರಳುತ್ತಿದ್ದಾಗ ಈ ಅವಗಢ

ಸಂಭವಿಸಿದೆ.

ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.