ಮುಖಪುಟ :: ಭಾರತಕ್ಕೆ ಎನ್‌ಎಸ್‌ಜಿ ವಿಯಾಯಿತಿ

ಭಾರತಕ್ಕೆ ಎನ್‌ಎಸ್‌ಜಿ ವಿಯಾಯಿತಿ


07 September 2008

nsg.jpg

 

*ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಹಾದಿ ಸುಗಮ *ಬುಶ್-ಮನ್‌ಮೋಹನ್ ಶುಭಾಶಯ ವಿನಿಮಯ

ಹೊಸದಿಲ್ಲಿ, ಸೆ.೬: ಪರಮಾಣು ಪೂರೈಕೆ ಗುಂಪು ಭಾರತದ ಮೇಲೆ ವಿಸಿದ್ದ ನಿಷೇಧ ಸಂಪೂರ್ಣವಾಗಿ ತೆರವುಗೊಂಡಿದೆ.

ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್‌ರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಭಾರತದೊಂದಿಗೆ ಪರಮಾಣು ವಾಣಿಜ್ಯ ಪುನಾರಂಭಕ್ಕೆ ಅನುಕೂಲವಾಗುವಂತೆ ೪೫ಸದಸ್ಯರ  ಪರಮಾಣು ಪೂರೈಕೆ ಗುಂಪು ಶನಿವಾರ ಸರ್ವಾನುಮತಿಯಿಂದ ಸಂಪೂರ್ಣ ನಿಷೇಧ ತೆರವಿನ ನಿರ್ಣಯವನ್ನು ಮಂಜೂರು ಮಾಡಿದೆ.

ಈ ಕುರಿತಾದ ಕರಡು ನಿರ್ಣಯದಲ್ಲಿ ಯಾವುದೇ ಮಹತ್ವದ ಬದಲಾವಣೆಯನ್ನು ಮಾಡದೆ, ಅಮೆರಿಕ ಬಳಸಿದ ಭಾಷೆ ಹಾಗೂ ಶಬ್ದಗಳನ್ನು ಎಲ್ಲ ಎನ್‌ಎಸ್‌ಜಿ ಸದಸ್ಯರು ಅಂಗೀಕರಿಸಿದ್ದಾರೆ. ಅಮೆರಿಕವು ಈ ಮೊದಲು ಕರಡು ಒಪ್ಪಂದದ ಕೆಲವು ಬದಲಾವಣೆಗಳ ಕುರಿತು ಭಾರತವನ್ನು ಸಂಪರ್ಕಿಸಿತ್ತು. ಅದಕ್ಕೆ ಹೊಸದಿಲ್ಲಿಯು ಅಂಗೀಕಾರ ನೀಡಿದ ಬಳಿಕ ಕರಡನ್ನು ಎನ್‌ಎಸ್‌ಜಿಯ ಮುಂದಿಡಲಾಯಿತು.

ಚಾರಿತ್ರಿಕ ವಿಜಯ: ಕಾಂಗ್ರೆಸ್

ಹೊಸದಿಲ್ಲಿ, ಸೆ.೬: ಭಾರತದ ಮೇಲಿನ ಎನ್‌ಎಸ್‌ಜಿ ನಿಷೇಧ ತೆರವನ್ನು ಚಾರಿತ್ರಿಕವೆಂದು ಬಣ್ಣಿಸಿರುವ ಕಾಂಗ್ರೆಸ್, ಇದು ಕೇವಲ ಯುಪಿಎಗೆ ಮಾತ್ರವಲ್ಲದೆ ಎಲ್ಲ ಭಾರತೀಯರ ಮಹತ್ವದ ವಿಜಯವಾಗಿದೆ ಎಂದು ಹೇಳಿದೆ.

ಇದು ಭಾರತದ ಪಾಲಿಗೆ ಚರಿತ್ರಾರ್ಹ ದಿನವಾಗಿದೆ, ಇದು ಸ್ವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ದಿನವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ನುಡಿದಿದ್ದಾರೆ.

ಇದು ಕೇವಲ ಯುಪಿಎ ಸರಕಾರದ ವಿಜಯವಲ್ಲ ಬದಲಾಗಿ ಎಲ್ಲ ಭಾರತೀಯರ ಮಹತ್ವದ ವಿಜಯವಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.