ಮುಖಪುಟ :: ಝರ್ದಾರಿ ಪಾಕ್ ಅಧ್ಯಕ್ಷ
ಝರ್ದಾರಿ ಪಾಕ್ ಅಧ್ಯಕ್ಷ
ಇಸ್ಲಾಮಾಬಾದ್, ಸೆ. ೬: ಭರ್ಜರಿ ವಿಜಯವೆನ್ನಬಹುದಾದ ಬೆಳವಣಿಯೊಂದರಲ್ಲಿ ಪಾಕಿಸ್ತಾನದ ಆಳುವ ಪಿಪಿಪಿಯ ಸಹಾಧ್ಯಕ್ಷ ಆಸಿಫ್ ಅಲಿ ಝರ್ದಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ವಿಜಯ ಸಾಸಿದ್ದಾರೆ.
೪೩೬ ಸದಸ್ಯ ಬಲದ ರಾಷ್ಟ್ರೀಯ ಸಂಸತ್‌ನ ಎಲ್ಲ ಸದಸ್ಯರೂ ಮತದಾನ ಮಾಡಿದ್ದರು. ಆದರೆ ೧೦ ಮತಗಳು ತಿರಸ್ಕೃತಗೊಂಡಿದ್ದವು.
ಝರ್ದಾರಿಗೆ ಗೆಲ್ಲಲು ೩೮೧ ಮತಗಳ ಅಗತ್ಯವಿತ್ತು. ಆದರೆ ಅವರು ಪಂಜಾಬ್ ವಿಧಾನಸಭೆಯ ಫಲಿತಾಂಶದ ಹೊರತಾಗಿಯೂ ೪೬೦ ಮತಗಳನ್ನು ಗಳಿಸಿದ್ದರು.
ಬಲೂಚಿಸ್ತಾನ ಹಾಗೂ ಸಿಂಧ್ ಪ್ರಾಂತ್ಯಗಳಲ್ಲಿ ಅವರಿಗೆ ಭಾರೀ ಪ್ರಮಾಣದ ಮತಗಳು ಲಭಿಸಿವೆ.
ಝರ್ದಾರಿ ಬಲೂಚಿಸ್ತಾನದಲ್ಲಿ ೬೫ರಲ್ಲಿ ೫೯ ಹಾಗೂ ಸಿಂಧ್‌ನಲ್ಲಿ ೧೬೩ರಲ್ಲಿ ೧೬೨ ಮತಗಳನ್ನು ಗಳಿಸಿದ್ದಾರೆಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಒಟ್ಟು ೭೦೨ ಮತದಾರರಿದ್ದು, ಗೆಲುವಿಗೆ ೩೫೨ ಮತಗಳನ್ನು ಗಳಿಸಲೇ ಬೇಕು. ಚುನಾವಣೆ ಶನಿವಾರ ನಡೆದಿತ್ತು.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 33 ಬಾರಿ ಓದಲ್ಪಟ್ಟಿದೆ.





