ಮುಖಪುಟ :: ಜೈಲಿನಲ್ಲಿ ‘ಕೇಸರಿ ಭಯೋತ್ಪಾದನೆ': ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ
ಜೈಲಿನಲ್ಲಿ ‘ಕೇಸರಿ ಭಯೋತ್ಪಾದನೆ': ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ
ಮಂಗಳೂರು, ಅ.೩೧: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಹಾಗೂ ಅವರ ಸಹಚರರು ಸಹ ಕೈದಿಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಕಾರಿ ಕಚೇರಿಯ ಎದುರು ಇಂದು ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಕರ್ನಾಟಕ ಫಾರಂ ಫಾರ್ ಡಿಗ್ನಿಟಿ, ಪಿಯುಸಿಎಲ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಗಳ ಸದಸ್ಯರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಸಬ್‌ಜೈಲಿನ ಮುಂದಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪೊಲೀಸ್ ವರಿಷ್ಠಾಕಾರಿಗಳ ಮನವಿಯ ಬಳಿಕ ಜಿಲ್ಲಾಕಾರಿ ಕಚೇರಿಯ ಎದುರಿಗೆ ಸ್ಥಳಾಂತರಿಸಿದರು. ಪ್ರತಿಭಟನಾ ಸಭೆಯ ಬಳಿಕ ಸಂಘಟನೆಗಳ ಮುಖಂಡರು ಜಿಲ್ಲಾಕಾರಿಗೆ ಮನವಿ ಸಲ್ಲಿಸಿ ಬಜರಂಗದಳದ ಮುಖಂಡ ಮಹೇಂದ್ರ ಕುಮಾರ್‌ರನ್ನು ತಕ್ಷಣ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕು. ಸಬ್‌ಜೈಲ್ ಅಕ್ಷಕ ಈಶ್ವರ ನಾಯ್ಕರನ್ನು ಅಮಾನತುಗೊಳಿಸಬೇಕು. ಜಿಲ್ಲಾ ಕಾರಾಗೃಹದ ಕೈದಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಕೈದಿಗಳ ಮೇಲೆ ದೌರ್ಜನ್ಯ ಸರಕಾರದ ಹೊಣೆಗೇಡಿತನದ ಪರಮಾವ
ಬಂಧನದಲ್ಲಿರುವ ಕೈದಿಗಳ ಮೇಲೆ ಹಲ್ಲೆ ನಡೆಸಿರುವುದು ಸರಕಾರದ ಹೊಣೆಗೇಡಿತನದ ಪರಮಾವ. ನಿರ್ಲಜ್ಜತನದ ಪ್ರತೀಕ. ಪ್ರಜೆಗಳಿಗೆ ರಕ್ಷಣೆ ನೀಡಬೇಕಾದವರೇ ಕ್ರಿಮಿನಲ್‌ಗಳಂತೆ ವರ್ತಿಸಿದರೆ ನಾಗರಿಕರು ಯಾರ ಬಳಿ ದೂರು ಕೊಡಬೇಕು? ಎಂದು ಖ್ಯಾತ ಚಿಂತಕ, ಜಿ. ರಾಜಶೇಖರ್ ಕಳವಳ ವ್ಯಕ್ತಪಡಿಸಿದರು.
ಗುಜರಾತಿನಲ್ಲಿ , ಒರಿಸ್ಸಾದಲ್ಲೂ ಇದೇ ರೀತಿ ಆಳುವವರು, ಪೊಲೀಸರ ಹೊಣೆಗೇಡಿತನದಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಕರ್ನಾಟಕದಲ್ಲೂ ಅದೇ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನರು ದಂಗೆ ಏಳಲು ಸರಕಾರದ ಆಡಳಿತ ವೈಫಲ್ಯವೇ ಕಾರಣವಾಗಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 1746 ಬಾರಿ ಓದಲ್ಪಟ್ಟಿದೆ.





