ಮುಖಪುಟ :: ಜಾತ್ಯತೀ ಶಕ್ತಿಗಲೊಂದಿಗೆ ಹೊಂದಾಣಿಕೆ: ಪೃಥ್ವಿರಾಜ್ ಚೌಹಾಣ್
ಜಾತ್ಯತೀ ಶಕ್ತಿಗಲೊಂದಿಗೆ ಹೊಂದಾಣಿಕೆ: ಪೃಥ್ವಿರಾಜ್ ಚೌಹಾಣ್
ಮೈಸೂರು, ಅ.೨೫: ರಾಜ್ಯ ವಿಧಾನ ಸಭೆಯ ೮ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಾತ್ಯತೀತ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪೃಥ್ವಿರಾಜ್ ಚೌಹಾಣ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ಯತೀತ ಶಕ್ತಿಗಳೆಂದರೆ ಜೆಡಿಎಸ್ ಒಂದೇ ಅಲ್ಲ ಅಥವಾ ಅದು ರಾಜಕೀಯ ಪಕ್ಷವೇ ಆಗಿರಬೇಕೆಂದಿಲ್ಲ. ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದರಲ್ಲಿ ಒಳಗೊಂಡಿರುತ್ತಾರೆ ಎಂದವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಮುಗಿದ ಅಧ್ಯಾಯ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನೀಡಿರುವ ಹೇಳಿಕೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಆ ಬಗ್ಗೆ ಪ್ರತಿಕ್ರಿಯೆ ನೀಡಲು ಚೌಹಾಣ್ ನಿರಾಕರಿಸಿದರು. ಆದಾಗ್ಯೂ ದೇವೇಗೌಡರ ಹೇಳಿಕೆಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ಅವರು ಹೇಳಿದರು.
ಹಣ ಮತ್ತು ಅನೈತಿಕ ಮಾರ್ಗದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಕಾರಕ್ಕೆ ಬಂದಿದ್ದು, ತನ್ನ ನಡವಳಿಕೆಗೆ ತಕ್ಕಂತೆ ಆಡಳಿತ ನಡೆಸುತ್ತಿದೆ. ಆದುದರಿಂದ ಇಂತಹ ಪಕ್ಷ ಹಾಗೂ ಸರಕಾರದ ವಿರುದ್ಧ ಕಾಂಗ್ರೆಸ್ ನೈತಿಕ ಮಾರ್ಗದಲ್ಲಿ ಹೋರಾಟ ನಡೆಸಲಿದೆ ಎಂದು ಚೌಹಾಣ್ ನುಡಿದರು.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 60 ಬಾರಿ ಓದಲ್ಪಟ್ಟಿದೆ.




