ಮುಖಪುಟ :: ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ

ಕ್ರೈಸ್ತ ಸನ್ಯಾಸಿನಿಗೆ ರಕ್ಷಣೆಯ ಭರವಸೆ


26 October 2008

ಭುವನೇಶ್ವರ, ಅ.೨೫: ಅತ್ಯಾಚಾರಿಗಳನ್ನು ಗುರುತಿಸಲು ಸಹಕಾರ ನೀಡುವಂತೆ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿಯಲ್ಲಿ ಮನವಿ ಮಾಡಿರುವ ಒರಿಸ್ಸಾ  ಸರಕಾರ ಆಕೆಗೆ ಸಂಪೂರ್ಣ ರಕ್ಷಣೆಯ ಭರವಸೆ ನೀಡಿದೆ.

ತಾವು ಆಕೆಗೆ ಸಂಪೂರ್ಣ ರಕ್ಷಣೆಯ ಭರವಸೆ ನೀಡಿದ್ದು, ತನಿಖೆಗೆ ಅವಳ ಸಹಕಾರವನ್ನು ಯಾಚಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಮನಮೋಹನ್ ಪ್ರಹರಾಜ್ ಪತ್ರಕರ್ತರಿಗೆ ತಿಳಿಸಿದರು.

ಸಂತ್ರಸ್ತೆ ಸುಭದ್ರವೆಂದು ಭಾವಿಸುವ ಯಾವುದೇ ಸ್ಥಳದಲ್ಲಿ ಆರೋಪಿಗಳ ಗುರುತು ಪತ್ತೆ ಪೆರೇಡ್ ನಡೆಸಲು ಸಿದ್ಧವೆಂದು ಸರಕಾರ ಹೇಳಿದೆ.

ಘಟನೆ ನಡೆದ ಬಳಿಕ ‘ಕಾಣೆ'ಯಾಗಿದ್ದ ಕ್ರೈಸ್ತ ಸನ್ಯಾಸಿನಿ ಶುಕ್ರವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಅಂದಿನ ದಾರುಣ ಘಟನೆಯ ವಿವರ ನೀಡಿದ್ದಳು. ಪ್ರಕರಣದ ಕುರಿತು ಸಿಬಿಐ ತನಿಖೆ ಅಗತ್ಯವಿಲ್ಲವೆಂದು ಬುಧವಾರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಪೊಲೀಸರಿಗೆ ತನಿಖೆಯಲ್ಲಿ ಸಹಕಾರ ನೀಡುವಂತೆ ಆಕೆಗೆ ಸೂಚಿಸಿತ್ತು.