ಮುಖಪುಟ :: ಕಾಂಗ್ರೆಸ್‌ನ ಜತೆ ಮೈತ್ರಿಯಿಲ್ಲ: ಗೌಡ

ಕಾಂಗ್ರೆಸ್‌ನ ಜತೆ ಮೈತ್ರಿಯಿಲ್ಲ: ಗೌಡ


26 October 2008

ಬೆಂಗಳೂರು, ಅ.೨೫: ರಾಜ್ಯದ ೮ ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿಯ ಕುರಿತು ಇನ್ನು ಮುಂದೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧರ್ಮದ ಪರಮಾವಯಾಗಿ ಬಿಜೆಪಿ ನಡೆಸಿದ ‘ಆಪರೇಶನ್ ಕಮಲ'ದಲ್ಲಿ ೨೦ ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು.

ಇದರಿಂದ ಜಾತ್ಯತೀತ ಶಕ್ತಿಗಲು ಒಗ್ಗೂಡಬೇಕು ಎಂಬ ಕಾರಣಕ್ಕೆ  ತಾನು ಮೈತ್ರಿಯ ವಿಷಯವನ್ನು ಪ್ರಸ್ತಾಪಿಸಿದ್ದೆ. ಅನಂತರ ಕುಮಾರಸ್ವಾಮಿ ಕೂಡ ಅದೇ ರೀತಿ ಮಾತನಾಡಿದರು.

ಆದರೆ, ಕಾಂಗ್ರೆಸ್ ಮುಖಂಡರು ತಮ್ಮ ಔದಾರ್ಯವನ್ನು ಬಲಹೀನತೆಯೆಂದು ಭಾವಿಸಿ ತಿರಸ್ಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಗುಡುಗಿದರು.

ಕಾಂಗ್ರೆಸ್‌ನೊಂದಿಗಿನ ಮೈತ್ರಿಯ ಕುರಿತು ಪ್ರತಿದಿನ ಹೇಳಿಕೆ ನೀಡುವ ಬದಲು ಕಮ್ಯೂನಿಸ್ಟ್ ಮತ್ತು ಬಿಎಸ್‌ಪಿ ಜತೆ ಸೇರಿ ಚುನಾವಣೆಯ ರಣರಂಗಕ್ಕಿಳಿಯುತ್ತೇವೆ. ತಮ್ಮ ಪಕ್ಷಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪ್ರತಿರ್ಸ್ಪಯಾಗಿರುತ್ತವೆ ಎಂದು ಗೌಡ ಸ್ಪಷ್ಟಪಡಿಸಿದರು.