ಮುಖಪುಟ :: ಕಾಡು ಮೃಗಗಳ ಚರ್ಮ ಮಾರಾಟ ಜಾಲ ಪತ್ತೆ: ಐವರ ಬಂಧನ
ಕಾಡು ಮೃಗಗಳ ಚರ್ಮ ಮಾರಾಟ ಜಾಲ ಪತ್ತೆ: ಐವರ ಬಂಧನ
ಕುಂದಾಪುರ, ಅ.೩೧: ವಿವಿಧ ಕಾಡುಮೃಗಗಳ ಚರ್ಮಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಕುಂದಾಪುರ ಪೊಲೀಸರು ಈ ಸಂಬಂಧ ಐದು ಮಂದಿ ಆರೋಪಿಗಳನ್ನು ಬಂಸಿ, ಅಪಾರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಲ್ಲೂರಿನಿಂದ ಮಂಗಳೂರು ಕಡೆ ವ್ಯಾಪಾರಕ್ಕಾಗಿ ಜೀಪಿನಲ್ಲಿ ಪ್ರಾಣಿಗಳ ಚರ್ಮ, ಕೋಡು, ಉಗುರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಕುಂದಾಪುರ ತಾಲೂಕಿನ ಅಂಪಾರು ಜಂಕ್ಷನ್ ಬಳಿ ಗುರುವಾರ ಸಂಜೆ ೪:೩೦ಕ್ಕೆ ಕುಂದಾಪುರ ಹಾಗೂ ಶಂಕರನಾರಾಯಣ ಪೊಲೀಸರು ಪತ್ರೆ ಹಚ್ಚಿದರು.
ಅಮಾಸೆಬೈಲು ಮಟ್ಟು ಗ್ರಾಮದ ರಾಮ ಪೂಜಾರಿಯ ಮಗ ಸಂತೋಷ್ ಪೂಜಾರಿ (೨೭), ಬಾವಾಡಿ ಕಂಬ್ಲಗದ್ದೆಯ ರಾಮ ನಾಯ್ಕರ ಮಗ ನಾರಯಣ ನಾಯ್ಕ (೪೦), ಉಳ್ಳೂರು ತೊಂಕೊದ್ದುವಿನ ರಾಜೀವ ಶೆಟ್ಟಿಯವರ ಮಗ ಶ್ರೀಕಾಂತ್ ( ೨೧), ಯಡಮೊಗೆ ಗ್ರಾಮದ ಬಸವ ಪೂಜಾರಿಯವರ ಮಗ ಚಂದ್ರ ಪೂಜಾರಿ (೪೦), ಕೊಲ್ಲೂರು ಗ್ರಾಮದ ಹೆಗ್ಡೆ ಹಕ್ಲುವಿನ ರಾಮಯ್ಯ ಬಳೆಗಾರ ಮಗ ಕೃಷ್ಣಯ್ಯ ಬಳೆಗಾರ (೩೦) ಎಂಬವರು ಬಂತರು.
ಬಂತರಿಂದ ಸುಮಾರು ಐದು ಲಕ್ಷ ರೂ. ಮೌಲ್ಯದ ಹುಲಿ ಚರ್ಮ, ಮರಿ ಹುಲಿಯ ಚರ್ಮ, ಚಿರತೆಯ ಚರ್ಮ, ಜಿಂಕೆ ಚರ್ಮ, ೧೨ ಕಾಡುಕೋಣದ ಚರ್ಮ, ಜಿಂಕೆ ಚರ್ಮ, ೧೨ ಕಾಡುಕೋಣದ ಕೋಡು ಗಳು, ನಾಲ್ಕು ಹುಲಿಯ ಉಗುರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 338 ಬಾರಿ ಓದಲ್ಪಟ್ಟಿದೆ.





