ಮುಖಪುಟ :: ಒರಿಸ್ಸಾದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಉಪವಾಸ ಮುಷ್ಕರ; ಮಾನವ ಸರಪಳಿ
ಒರಿಸ್ಸಾದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಉಪವಾಸ ಮುಷ್ಕರ; ಮಾನವ ಸರಪಳಿ
ಮಂಗಳೂರು, ಸೆ.೬: ಒರಿಸ್ಸಾದಲ್ಲಿ ಕ್ರೈಸ್ತರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಈ ಬಗ್ಗೆ ರಾಜ್ಯ ಸರಕಾರದ ನಿಲುವನ್ನು ವಿರೋಸಿ ಜಿಲ್ಲಾಕಾರಿಯ ಕಚೇರಿ ಎದುರು ವಿವಿಧ ಸಮಾನ ಮನಸ್ಕ ಸಂಘಟನೆಗಳು ಉಪವಾಸ ಮುಷ್ಕರ ಮತ್ತು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದವು.
ರಾಜ್ಯದ ಶಿಕ್ಷಣ ಸಚಿವರು ಇತ್ತೀಚೆಗೆ ಒರಿಸ್ಸಾ ಘಟನೆಯನ್ನು ವಿರೋಸಿ ಬಂದ್ ಆಚರಿಸಿದ ಶಾಲೆಗಳಿಗೆ ನೀಡಿದ ನೋಟಿಸನ್ನು ವಾಪಾಸು ಪಡೆಯಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಬೆಳಗ್ಗಿನಿಂದ ಸಂಜೆಯವರೆಗೆ ಉಪವಾಸ ಮುಷ್ಕರ ನಡೆದು ಸಂಜೆಯ ವೇಳೆಗೆ ಪ್ರತಿಭಟನ ಸಭೆ ನಡೆಯಿತು.
ಒರಿಸ್ಸಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ರೀತಿಯ ವಾತಾವರಣವನ್ನು ಕರಾವಳಿಯಲ್ಲೂ ಕೆಲವು ಸಂಘಟನೆಗಳು ಸೃಷ್ಟಿಸಲು ಅಲ್ಲಲ್ಲಿ ಪ್ರಯತ್ನ ನಡೆಸುತ್ತಿವೆ ಎಂಜು ಚಿಂತಕ ಪಟ್ಟಾಭಿರಾಮ ಸೋಮಯಾಜಿ ನುಡಿದರು. ನ್ಯಾಯಾಂಗ ಪೊಲೀಸ್ ವ್ಯವಸ್ಥೆ, ಸಂವಿಧಾನ ಹಾಗೂ ಸ್ವಾತಂತ್ರ್ಯ ಹೋರಾಟದ ಧ್ಯೇಯಗಳನ್ನು ಗಾಳಿಗೆ ತೂರಿ ಸಂಘಪರಿವಾರದ ವ್ಯಕ್ತಿಗಳು, ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿವೆ. ಒರಿಸ್ಸಾದಲ್ಲೂ ಇದೇ ರೀತಿಯಾಗಿ ಕ್ರೈಸ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಕೃತ್ಯವನ್ನು ಇಲ್ಲಿನ ಪ್ರಜ್ಞಾವಂತ ಜನರು, ಕ್ರೈಸ್ತರು, ಮುಸಲ್ಮಾನರು, ದಲಿತರು ಒಂದಾಗಿ ಪ್ರತಿಭಟಿಸಬೇಕಾಗಿದೆ ಎಂದು ಪಟ್ಟಾಭಿರಾಮ ಸೋಮಯಾಜಿ ತಿಳಿಸಿದರು.
ಮುಸ್ಲಿಮ್ ವರ್ತಕರ ಸಂಘದ ಅಧ್ಯಕ್ಷ ಅಲಿಹಸನ್, ಮೈಸೂರು ಅಹಿಂದ ಸಂಘಟನೆಯ ಗ್ರೆಶನ್ ರೊಡ್ರಿಗಸ್, ಕೆಎಫ್‌ಡಿ ಸಂಘಟನೆಯ ಅಬ್ದುಲ್ ರಝಾಕ್ ಈ ಸಂದರ್ಭದಲ್ಲಿ ಮಾತನಾಡಿದರು.
ವಿವಿಧ ಸಂಘಟನೆಗಳ ಪ್ರತಿನಿಗಳಿಂದ ಜಿಲ್ಲಾಕಾರಿ ಕಚೇರಿ ಎದುರು ಬೆಳಗ್ಗಿನಿಂದ ಸಂಜೆಯವರೆಗೆ ಉಪವಾಸ ಮುಷ್ಕರ ನಡೆಯಿತು. ಬೆಳಗ್ಗೆ ಉಪವಾಸ ಮುಷ್ಕರವನ್ನು ಸ್ವಾತಂತ್ರ್ಯ ಹೋರಾಟಗಾರ, ಗಾಂವಾದಿ ಪುಂಡಲೀಕ ಕರ್ಕೇರಾ ಉದ್ಘಾಟಿಸಿದರು. ಈ ಸಂದರ್ಭ ಸಮಾನಮನಸ್ಕ ಸಂಘಟನೆಗಳ ಡೆನ್ನಿಸ್ ಡಿಸಿಲ್ವಾ, ಸುರೇಶ್ ಬಳ್ಳಾಲ್, ಅಲಿ ಹಸನ್, ಹಮೀದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 42 ಬಾರಿ ಓದಲ್ಪಟ್ಟಿದೆ.





