ಮುಖಪುಟ :: ಉಡುಪಿ ಆರ್‌ಟಿಒ ಅಕಾರಿಯಿಂದ ಕಿರುಕುಳ: ದೂರು
ಉಡುಪಿ ಆರ್‌ಟಿಒ ಅಕಾರಿಯಿಂದ ಕಿರುಕುಳ: ದೂರು
ಮಂಗಳೂರು, ಸೆ. ೬: ಉಡುಪಿ ಆರ್‌ಟಿಒ ಕಚೇರಿಯ ಅಕಾರಿಗಳು ವಾಹನ ತಪಾಸಣೆಯ ವೇಳೆ ಸರಕು ಸಾಗಾಟದ ವಾಹನವೊಂದನ್ನು ತಡೆಹಿಡಿದು ಮೂರು ದಿನಗಳ ಬಳಿಕ ದಂಡ ಹಾಗೂ ಹೆಚ್ಚುವರಿ ಹಣ ಸ್ವೀಕರಿಸಿ ಬಿಡುಗಡೆ ಮಾಡಿದ್ದಾರೆ ಎಂದು ವಾಹನದ ಮಾಲಕ ಹಸನಬ್ಬ ಮೇಲಕಾರಿಗಳಿಗೆ ದೂರು ನೀಡಿದ್ದಾರೆ.
ಸುರತ್ಕಲ್‌ನ ವ್ಯಾಪಾರಿ ಹಸನಬ್ಬ ಅವರು ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಸಹಿತ ಕಳೆದ ೨೦ ವರ್ಷಗಳಿಂದ ಉಡುಪಿ-ಮಂಗಳೂರು ಪ್ರದೇಶದಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. ಸೆಪ್ಟಂಬರ್ ೨ರಂದು ಪಡುಬಿದ್ರೆಯ ಸಂತೆಯ ಬಳಿ ಅಂಗಡಿಗೆ ಸರಕು ಸರಬರಾಜು ಮಾಡುತ್ತಿದ್ದಾಗ ವಾಹನವನ್ನು ತಡೆದು ನಿಲ್ಲಿಸಿದ ಆರ್‌ಟಿಒ ಇಲಾಖೆಯ ಚೆನ್ನಪ್ಪ ಎಂಬ ಮೋಟಾರು ವಾಹನ ನಿರೀಕ್ಷಕ ಹಸನಬ್ಬರಿಂದ ದಾಖಲೆ ಕೇಳಿದ್ದರು.
ಹಸನಬ್ಬ ಎಲ್ಲ ದಾಖಲೆ ನೀಡಿದ್ದರು. ವಾಹನದ ತೆರಿಗೆ ಪಾವತಿಗೆ ಸಂಬಂಸಿದಂತೆ ದಾಖಲೆಯನ್ನೂ ನೀಡಿದ್ದರು. ಆ ದಾಖಲೆಯಲ್ಲಿ ೩೧.೧೦.೨೦೦೮ರವರೆಗೆ ಮುಂದಿನ ತೆರಿಗೆ ಪಾವತಿಗೆ ಕಾಲಾವಾಕಾಶ ಇತ್ತು.
ಆದರೆ ಆರ್‌ಟಿಒ ಇಲಾಖೆಯ ಅಕಾರಿ ಈ ದಾಖಲೆ ಸರಿ ಇಲ್ಲ. ನೀವು ತೆರಿಗೆ ಕಟ್ಟಿಲ್ಲ ಎಂದು ಹೇಳಿ ವಾಹನವನ್ನು ಸ್ವಾನಕ್ಕೆ ತೆಗೆದುಕೊಂಡರು. ಹಬ್ಬಕ್ಕೆ ಅಂಗಡಿಗಳಿಗೆ ಸಾಮಗ್ರಿ ಪೂರೈಸುತ್ತಿದ್ದ ಹಸನಬ್ಬರು ಮೂಲ ದಾಖಲೆಯ ಪ್ರತಿ ತೋರಿಸಿದರೂ ಅವಕಾಶ ನೀಡದೆ ಕಿರುಕುಳ ನೀಡಿದ್ದಾರೆ. ನಾಲ್ಕು ದಿನಗಳ ಬಳಿಕ ಮೂರು ಸಾವಿರ ದಂಡ ಹಾಗೂ ಹೆಚ್ಚಿನ ಹಣ ಪಡೆದು ಪಡುಬಿದ್ರೆ ಠಾಣೆಯಲ್ಲಿರಿಸಲಾಗಿದ್ದ ವಾಹನ ಬಿಡುಗಡೆಗೊಳಿಸಿದ್ದಾರೆ.
ತಾನು ಕೆಎ ೧೯ ಸಿ ೬೨೪೬ ನೋಂದಣಿ ಗುರುತಿನ ವಾಹನದ ತೆರಿಗೆಯನ್ನು ಆಗಸ್ಟ್ ೧೯ರಂದು ಪಾವತಿ ಮಾಡಿರುವ ದಾಖಲೆ ಇದ್ದರೂ ತನಗೆ ಅನ್ಯಾಯವಾಗಿದೆ ಎಂದು ಹಸನಬ್ಬ ದೂರಿನಲ್ಲಿ ತಿಳಿಸಿದ್ದಾರೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 32 ಬಾರಿ ಓದಲ್ಪಟ್ಟಿದೆ.




