ಮುಖಪುಟ :: ಉಡುಪಿಯಲ್ಲಿ ಮಳೆ; ಸಿಡಿಲಿಗೆ ಅಪಾರ ಹಾನಿ
ಉಡುಪಿಯಲ್ಲಿ ಮಳೆ; ಸಿಡಿಲಿಗೆ ಅಪಾರ ಹಾನಿ
ಉಡುಪಿ, ಅ.೨೫: ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದಾಗಿ ಭಾರೀ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ಉಡುಪಿಯಲ್ಲಿ ೫೦.೪೦ ಮಿ. ಮಳೆಯಾಗಿದೆ. ಕುಂದಾಪುರದಲ್ಲಿ ೨೨.೮೦ ಮಿ.ಮೀ. ಹಾಗೂ ಕಾರ್ಕಳದಲ್ಲಿ ೨೩.೮೦ ಮಿ.ಮೀ. ಮಳೆ ಸುರಿದ ಬಗ್ಗೆ ವರದಿಯಾಗಿದೆ.
೭೬ ಬಡಗುಬೆಟ್ಟು ವ್ಯಾಪ್ತಿಯ ಕುಕ್ಕಿಕಟ್ಟೆ ಯಲ್ಲಿ ಗುಲಾಬಿ ಪುಜಾರ್‍ತಿ ಎಂಬವರ ಮನೆಗೆ ಸಿಡಿಲು ಬಡಿದು ದೂರವಾಣಿ, ಫ್ರಿಜ್ ಸೇರಿದಂತೆ ವಿದ್ಯುತ್ ಉಪಕರಣಗಳೆಲ್ಲಾ ಹಾನಿಗೊಂಡಿದೆ. ಇದರಿಂದ ಮನೆಯಲ್ಲಿದ್ದ ಮಗುವೊಂದು ಗಾಯಗೊಂಡಿದೆ. ಅಂದಾಜು ಹತ್ತು ಸಾವಿರ ರೂ. ನಷ್ಟವಾಗಿರುವುದಾಗಿ ತಹಶೀಲ್ದಾರ್ ಕಚೇರಿಯಿಂದ ತಿಳಿದುಬಂದಿದೆ.
೮೦ ಬಡಗುಬೆಟ್ಟು ಗ್ರಾಮದ ರಾಜೀವ ನಗರದಲ್ಲಿ ನಿನ್ನೆ ಸಂಜೆಯ ವೇಳೆ ರಸ್ತೆಯಲ್ಲಿ ನಡೆದು ಹೋಗುತಿದ್ದ ಬಸವರಾಜ್ ಹಾಗೂ ಉಮೇಶ್ ಎಂಬವರಿಗೆ ಸಿಡಿಲು ಬಡಿದು ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
೭೬ ಬಡಗೆಟ್ಟು ಗ್ರಾಮದ ಕುಕ್ಕಿಕಟ್ಟೆ ಯಲ್ಲಿ ಗಿರಿಜ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ವಯರಿಂಗ್ ಸಂಪೂರ್ಣ ಹಾನಿಗೊಂಡು ೫ ಸಾವಿರ ರೂ. ನಷ್ಟವಾಗಿದೆ. ಹಿರೆಬೆಟ್ಟು ಗ್ರಾಮದ ವೆಂಕಪ್ಪ ಪ್ರಭು ಎಂಬವರ ಮನೆಗೂ ಸಿಡಿಲು ಬಡಿದು ೧೦ ಸಾವಿರ ರೂ. ನಷ್ಟವಾಗಿದೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 39 ಬಾರಿ ಓದಲ್ಪಟ್ಟಿದೆ.




