ಮುಖಪುಟ :: ಇಂದು ಮಂಗಳೂರು ಖಾಝಿಯಾಗಿ ಸಿ.ಎಎಂ.ಅಬ್ದುಲ್ಲಾ ಮುಸ್ಲಿಯಾರ್ ಅಕಾರ ಸ್ವೀಕಾರ
ಇಂದು ಮಂಗಳೂರು ಖಾಝಿಯಾಗಿ ಸಿ.ಎಎಂ.ಅಬ್ದುಲ್ಲಾ ಮುಸ್ಲಿಯಾರ್ ಅಕಾರ ಸ್ವೀಕಾರ
ಮಂಗಳೂರು, ಅ.೨೫: ಮಂಗಳೂರು ಖಾಝಿಯಾಗಿ ಸುಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ, ಅಲ್ಹಾಜ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕರವರು ಅ.೨೬ರಂದು ಅಕಾರ ಸ್ವೀಕರಿಸಲಿದ್ದು, ಈ ಸಂಬಂಧ ಸಿದ್ಧತೆಗಳು ಪೂರ್ಣಗೊಂಡಿವೆ.
ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಅಪರಾಹ್ಣ ೨ ಗಂಟೆಗೆ ಖಾಝಿ ಅಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ವಹಿಸಲಿದ್ದು, ಪಾಣಕ್ಕಾಡ್ ಸೈಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಲಿದ್ದಾರೆ.
ಕಾಞಂಗಾಡ್ ಸಂಯುಕ್ತ ಖಾಝಿ ಅಲ್ಹಾಜ್ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಖಾಝಿ ಪಟ್ಟ ನೀಡಲಿದ್ದು, ಕಾಸರಗೋಡು ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಟಿಕೆಎಂ ಬಾವ ಮುಸ್ಲಿಯಾರ್ ದುವಾ ಮಾಡಲಿದ್ದಾರೆ.
ಮೌಲವಿ ಫಾಝಿಲ್ ಬಾಖವಿ (ಎಂ.ಎಫ್.ಬಿ) ಪದವಿ ಪಡೆದಿರುವ ಚೆಂಬರಿಕ ಅಲ್ಹಾಜ್ ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್ ಇಂಗ್ಲಿಷ್, ಮಲಯಾಳಂ, ಉರ್ದು, ಅರಬಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು, ಅನೇಕ ಗ್ರಂಥಗಳನ್ನು ಬರೆದಿದ್ದಾರೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 22 ಬಾರಿ ಓದಲ್ಪಟ್ಟಿದೆ.




