ಮುಖಪುಟ :: ಅಸಮಾನತೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತ ಕೋಟಿ-ಚೆನ್ನಯ: ಆಚಾರ್ಯ

ಅಸಮಾನತೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತ ಕೋಟಿ-ಚೆನ್ನಯ: ಆಚಾರ್ಯ


26 October 2008

ಕಾರ್ಕಳ, ಅ.೨೫: ಸುಮಾರು ೪೫೦ ವರ್ಷಗಳ ಹಿಂದೆ ಅಸಮಾನತೆ, ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಅಮರರಾದ ತುಳು ನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ಸತ್ಯ, ಶೌರ್‍ಯ, ಧರ್ಮದ ನಿತ್ಯ ಸ್ಮರಣೆ ಹಾಗೂ ತ್ಯಾಗ ಬಲಿದಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಪರಿಕಲ್ಪನೆಯನ್ನು ಮಾಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.

ಇಂದು ಅವರು ಕಾರ್ಕಳದ ಪುರಸಭಾ ವ್ಯಾಪ್ತಿಯ ಕ್ರೀಡಾಂಗಣದ ಬಲಿ ಕೋಟಿ-ಚೆನ್ನಯ ಪಾರ್ಕ್‌ಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಇಂದು ಕನಸಿಗೆ ರೂಪಕೊಡುವ ಕೆಲಸ ಪ್ರಾರಂಭವಾಗಿದೆ. ದೇಶದ ಇತಿಹಾಸ ಮರೆತರೆ ಭವಿಷ್ಯವಿಲ್ಲ. ಕೇವಲ ಇಲ್ಲಿ ಹೆಸರಿಗೆಂಬಂತೆ ಕಾಂಕ್ರಿಟ್ ಕಟ್ಟಡಗಳಾಗಿರದೆ ಕೋಟಿ ಚೆನ್ನಯರ ಜೀವನ ಚರಿತೆ ಚಿರಪರಿಚಿತವಾಗಬೇಕು.

ಇದೊಂದು ಅಧ್ಯಯನ ಕೇಂದ್ರವಾಗಿಟ್ಟುಕೊಂಡು ಹಿಂದಿನ ಪುಣ್ಯ ಪುರುಷರ ದಿವ್ಯ ಚರಿತ್ರೆ ಮುಂದಿನ ಪೀಳಿಗೆಗೆ ತಲುಪಿಸುವಂತಹ ವ್ಯವಸ್ಥೆಯಾಗಬೇಕು ಎಂದು ಹೇಳಿದರು.