ಮುಖಪುಟ :: ಅಧ್ಯಾಪಕನಿಂದ ಬಾಲಕಿಯ ಅತ್ಯಾಚಾರ
ಅಧ್ಯಾಪಕನಿಂದ ಬಾಲಕಿಯ ಅತ್ಯಾಚಾರ
ಪುತ್ತೂರು, ಅ.೧೦: ಮದ್ರಸ ಅಧ್ಯಾಪಕನೋರ್ವನಿಂದ ನಿರಂತರ ಅತ್ಯಾಚಾರಕ್ಕೀಡಾದ ಬಾಲಕಿಯೋರ್ವಳು ಮಗುವೊಂದಕ್ಕೆ ಜನ್ಮ ನೀಡಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಸಮೀಪದ ಕಳಂಜಿಬೈಲು ಮಸೀದಿಯ ಆಡಳಿತಕ್ಕೊಳಪಟ್ಟ ಮದ್ರಸದಲ್ಲಿ ಅಧ್ಯಾಪಕನಾಗಿರುವ ಸುಳ್ಯ ತಾಲೂಕಿನ ಪಂಜ ಗ್ರಾಮದ ಎಣ್ಮೂರು ನಿವಾಸಿ ಆಸಿಫ್ ಬಾಖವಿ ಎಂಬಾತನೆ ಈ ದುಷ್ಕೃತ್ಯ ನಡೆಸಿದ ಆರೋಪಿ. ಈತ ಸ್ಥಳೀಯ ೧೨ ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದು, ಆಕೆ ಗರ್ಭವತಿಯಾಗಲು ಕಾರಣವಾಗಿದ್ದ. ಬಾಲಕಿಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ತಾಯಿ ಮತ್ತು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ಒಪ್ಪಿಸಲಾಗಿದೆ.
ಅಪ್ರಾಪ್ತ ಬಾಲಕಿಗೆ ಆಗಿರುವ ಅನ್ಯಾಯದ ವಿರುದ್ಧ ಕೆಎಫ್‌ಡಿ ಹೋರಾಟ ನಡೆಸಲು ಮುಂದಾಗಿದೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 84 ಬಾರಿ ಓದಲ್ಪಟ್ಟಿದೆ.




