ಕರಾವಳಿ

ಭಟ್ಕಳದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ: ಬೆಚ್ಚಿಬಿದ್ದ ಜನತೆ

31-bkl-02.jpg

ಭಟ್ಕಳ, ಅ.೩೧: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಮುನ್ನ ದಿನವಾದ ಶುಕ್ರವಾರ ಭಟ್ಕಳದಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದ್ದು ಇಲ್ಲಿನ ಮೌಲಾನ ಅಝಾದ್ ರಸ್ತೆಯಲ್ಲಿರುವ ಕಳಿ ಹನುಮಂತ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಯಾರೋ ಕಿಡಿಗೇಡಿಗಳು ಬಾಂಬ್‌ನ್ನು ಹೋಲುವಂತಹ ವಸ್ತುವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಪರಿಣಾವಾಗಿ ಮಧ್ಯಾಹ್ನದ ವರೆಗೂ ಇಲ್ಲಿನ ಜನರಲ್ಲಿ ಭಯ ಹಾಗೂ ಆತಂಕವು ಮನೆಮಾಡಿಕೊಂಡಿತ್ತು.  ಮುಂದೆ ಓದಿ »

ಕಾಡು ಮೃಗಗಳ ಚರ್ಮ ಮಾರಾಟ ಜಾಲ ಪತ್ತೆ: ಐವರ ಬಂಧನ

UD.KOLLUR-CRIME.jpg

ಕುಂದಾಪುರ, ಅ.೩೧: ವಿವಿಧ ಕಾಡುಮೃಗಗಳ ಚರ್ಮಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಕುಂದಾಪುರ ಪೊಲೀಸರು ಈ ಸಂಬಂಧ ಐದು ಮಂದಿ ಆರೋಪಿಗಳನ್ನು ಬಂಸಿ, ಅಪಾರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಮುಂದೆ ಓದಿ »

ಬೈಕ್ ಢಿಕ್ಕಿ: ವಿದ್ಯಾರ್ಥಿ ಬಲಿ

ಇನ್ನೋರ್ವನಿಗೆ ಗಂಭೀರ ಗಾಯ

ಕಾಸರಗೋಡು, ಅ.೩೧: ರಾಷ್ಟ್ರೀಯ ಹೆದ್ದಾರಿ ಸಮೀಪದ ಚೆಂಗಳ ಸಂತೋಷ್ ನಗರದಲ್ಲಿ ಬೈಕ್ ಮತ್ತು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಇನ್ನೋರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.  ಮುಂದೆ ಓದಿ »

ಮನಪಾ ಸಭೆ: ಗದ್ದಲಕ್ಕೆ ಕಾರಣವಾದ ‘ಮನಪಾದ ಅಭಿವೃದ್ಧಿ'

mcc1.jpg

ಮಂಗಳೂರು, ಅ.೩೧: ಮನಪಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಷಯಗಳಿಗೆ ಸಂಬಂಸಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಆರೋಪ ಪ್ರತ್ಯಾರೋಪಗಳಲ್ಲೇ ನಿರತವಾಗಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಅವಕಾಶ ದೊರೆಯದ ಮನಪಾದ ಅಭಿವೃದ್ಧಿ ಚರ್ಚೆ ಗದ್ದಲಕ್ಕೆ ಕಾರಣವಾದ ಘಟನೆ ಶುಕ್ರವಾರ ಮನಪಾ ಸಾಮಾನ್ಯ ಸಭೆಯಲ್ಲಿ ನಡೆಯಿತು.  ಮುಂದೆ ಓದಿ »

ಪ್ರಮುಖ ಸುದ್ದಿಗಳು

ಮೊಳಗಿದ ಕನ್ನಡ ಡಿಂಡಿಮ: ಶಾಸ್ತ್ರೀಯ ಸ್ಥಾನಮಾನ ಘೋಷಣೆ

08oct31kpn58-front.jpg

ಹೊಸದಿಲ್ಲಿ, ಅ.೩೧: ಕನ್ನಡದ ಹಲವು ದಶಕಗಳ ಕನಸು ನನಸಾಗಿದೆ. ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಣೆಗೆ ನಿರ್ಧರಿಸಲಾಗಿದೆ. ಕನ್ನಡ ಜನತೆಯ ಪಾಲಿಗೆ ಇದು ರಾಜ್ಯೋತ್ಸವದ ಕೊಡುಗೆಯಾಗಿದೆ.  ಮುಂದೆ ಓದಿ »

ಜೈಲಿನಲ್ಲಿ ‘ಕೇಸರಿ ಭಯೋತ್ಪಾದನೆ': ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ

dc-office2-front.jpg

ಮಂಗಳೂರು, ಅ.೩೧: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಬಜರಂಗದಳದ ಮಹೇಂದ್ರ ಕುಮಾರ್ ಹಾಗೂ ಅವರ ಸಹಚರರು ಸಹ ಕೈದಿಗಳ ಮೇಲೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಫಾರಂ ಫಾರ್ ಡಿಗ್ನಿಟಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಕಾರಿ ಕಚೇರಿಯ ಎದುರು ಇಂದು ಬೃಹತ್ ಪ್ರತಿಭಟನಾ ಸಭೆ ನಡೆಯಿತು.  ಮುಂದೆ ಓದಿ »

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ

hd.jpg

ಬೆಂಗಳೂರು, ಅ.೩೧: ಮೀರಾಜುದ್ದೀನ್ ಪಟೇಲ್‌ರ ನಿಧನದಿಂದ ತೆರವಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸಸ್ವಾಮಿಯವರನ್ನು ನೇಮಿಸಲಾಗಿದೆ.  ಮುಂದೆ ಓದಿ »

ಕಾಶ್ಮೀರಿ ಕವಿ ರಾಹಿಗೆ ಜ್ಞಾನ ಪೀಠ ಪ್ರಶಸ್ತಿ

Rehman-Rahi.jpg

ಹೊಸದಿಲ್ಸಿ, ಅ.೩೧: ಕಾಶ್ಮೀರಿ ಭಾಷೆಯನ್ನು ಶ್ರೀಮಂತಗೊಳಿಸುವುದಕ್ಕಾಗಿ ನೀಡಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಖ್ಯಾತ ಕಾಶ್ಮೀರಿ ಕವಿ ರಹ್ಮಾನ್ ರಾಹಿಯವರಿಗೆ ‘ಜ್ಞಾನಪೀಠ' ಪುರಸ್ಕಾರ ನೀಡಲಾಗುವುದು.  ಮುಂದೆ ಓದಿ »

ಸಂಪಾದಕೀಯ

‘ಇತ್ತುಗಳ ಧ್ವಜ'ವನ್ನು ಇನ್ನೆಷ್ಟು ದಿನ ಎತ್ತಿ ಹಿಡಿಯುವುದು?

ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ. ಹಲವು ದಶಕಗಳ ಹೋರಾಟಕ್ಕೆ, ಚಳವಳಿಗೆ ನ್ಯಾಯ ದೊರಕಿದೆ. ಕನ್ನಡ ಭಾಷೆಯ ಹಿರಿಮೆಯನ್ನು ದೇಶ ಮಾನ್ಯ ಮಾಡುವುದೆಂದರೆ, ಕನ್ನಡದ ಬದುಕು, ಸಂಸ್ಕೃತಿಯನ್ನು ಎತ್ತಿ ಹಿಡಿದಂತೆ. ಒಂದು ಭಾಷೆಯ ಪ್ರಾಚೀನತೆಯನ್ನು ಒಪ್ಪಿಕೊಳ್ಳುವುದೆಂದರೆ, ಆ ಭಾಷೆಯ ಮೂಲಕ ಬದುಕಿದ ಸಮುದಾಯದ ಜನರ ಪ್ರಾಚೀನತೆಯನ್ನು ಒಪ್ಪಿಕೊಂಡಂತೆ. ಕನ್ನಡಿಗರಿಗೆ ನಿಜಕ್ಕೂ ಇದು ಹೆಮ್ಮೆಯ ಕ್ಷಣ. ಈ ನಾಡು ನುಡಿಯನ್ನು ಕಟ್ಟಿದ ಮಹನೀಯರಿಗೆ ಈ ಕ್ಷಣ ಅರ್ಪಣೆಯಾಗಬೇಕು. ಹರಿದು ಹಂಚಿಹೋಗಿದ್ದ ಕನ್ನಡವನ್ನು ಏಕೀಕರಣಗೊಳಿಸಿ, ಆಧುನಿಕತೆಗೆ ಪೂರಕವಾಗಿ ಕನ್ನಡವನ್ನು ಬೆಳೆಸಿದ ಮಹನೀಯರೇ ಕನ್ನಡದ ಶಾಸ್ತ್ರೀಯ ಸ್ಥಾನಮಾನಕ್ಕೆ ಅಡಿಗಲ್ಲು ಹಾಕಿದವರು. ಇಂದು ಶಾಸ್ತ್ರೀಯ ಸ್ಥಾನಮಾನ ತಮ್ಮಿಂದ ದೊರಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಎದೆ ತಟ್ಟಿಕೊಳ್ಳುತ್ತಿದ್ದಾರೆ.  ಮುಂದೆ ಓದಿ »

ಫೀಡ್

Syndicate content

ಸದಸ್ಯರ ಲಾಗಿನ್

ಅಂಕಣಗಳು